Dear Members,
We regret to inform you all the news of the passing of Shri G. Suresh Hande, who was serving as the Manager of the Dakshina Kannada Koota Brahmana Mitra Mandali. He was admitted to the hospital on 01.09.2024 due to a sudden liver ailment, and within a few days, his condition worsened. Despite treatment, he passed away on Wednesday, 11.09.2024.
Shri Suresh Hande was well-regarded in the community for his hard work and dedicated service. Born on 05.04.1956 to late Shri J. Shankaranarayan Hande, a teacher at Gilyaru Shambhavi Higher Primary School, and late Parvati (daughter of Paramashwara Maiyya), he had been with the Mitra Mandali since April 2004, providing nearly 20 years of continuous service. His skills and commitment helped him manage the Mandali’s affairs effectively. He was appreciated by office bearers, executive committee members, and general members alike, and earned the trust of his colleagues and workers. Shri Suresh Hande’s passing is a significant loss for the Mandali.
In a meeting held on 24.09.2024, the Dakshina Kannada Koota Brahmana Mitra Mandali Executive Committee expressed its condolences and recorded his 20 years of valuable service with appreciation. Prayers were offered to Lord Guru Narasimha for his soul, and the committee also extended its wishes for strength and comfort to his wife during this difficult time.
Sincerely,
Dr. K. Suresh Aithal
Secretary, DKKBMM
ಸದಸ್ಯರ ಗಮನಕ್ಕಾಗಿ
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಜಿ.ಸುರೇಶ ಹಂದೆಯವರು ಹಠತ್ತಾಗಿ ಕಾಣಿಸಿಕೊಂಡ ಯಕೃತ್ತಿನ ಕಾಯಿಲೆಯಿಂದ ದಿನಾಂಕ 01.09.24ರಂದು ಆಸ್ಪತ್ರೆಗೆ ದಾಖಲಾದ ನಂತರ ಒಂದೆರಡು ದಿನಗಳಲ್ಲಿ ವಿಷಮ ಪರಿಸ್ಥಿತಿ ತಲುಪಿ, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ 11.09.2024 ಬುಧವಾರದಂದು ಕೊನೆಯುಸಿರೆಳೆದಿರುವುದು ಅತ್ಯಂತ ಆಘಾತಕಾರಿ ಹಾಗೂ ವಿಷಾದದ ಸಂಗತಿಯಾಗಿದೆ.
ಶ್ರೀಯುತ ಸುರೇಶ ಹಂದೆಯವರು ತಮ್ಮ ಅವಿರತ ಪರಿಶ್ರಮ ಹಾಗೂ ನಿಷ್ಟಾವಂತ ಸೇವೆಯಿಂದಾಗಿ ಸಮಾಜದಲ್ಲಿ ಜನಮನ್ನಣೆಗಳಿಸಿದ್ದರು. ಗಿಳಿಯಾರು ಶಾಂಭವಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ದಿ.ಜಿ.ಶಂಕರನಾರಾಣ ಹಂದೆ ಮತ್ತು ದಿ.ಪರಮೇಶ್ವರ ಮಯ್ಯರ ಮಗಳಾದ ದಿ.ಪಾರ್ವತಿ ದಂಪತಿಗಳಿಗೆ ದಿನಾಂಕ 05.04.1956 ರಂದು ಮಗನಾಗಿ ಜನಿಸಿದ ಶ್ರೀ ಜಿ.ಸುರೇಶ ಹಂದೆಯವರು ಏಪ್ರಿಲ್2004 ರಿಂದ ಮಿತ್ರಮಂಡಳಿಯ ಉದ್ಯೋಗಿಯಾಗಿ ಸುಮಾರು 20 ವರ್ಷಗಳ ನಿರಂತರ ಸೇವೆ ಸಲ್ಲಿಸಿರುತ್ತಾರೆ.
ಕಲಿತ ವಿದ್ಯೆಗಿಂತ ಗಳಿಸಿದ ಸಾಮರ್ಥ್ಯ ಹಾಗೂ ಸ್ವಂತ ಪ್ರತಿಭೆಯಿಂದಾಗಿ ಮಿತ್ರಮಂಡಳಿಯ ಎಲ್ಲಾ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಂಸ್ಥೆಯನ್ನು ಸರಿದೂಗಿಸಿಕೊಂಡು ಸಾಗುವಲ್ಲಿ ಯಶಸ್ವಿಯಾಗಿದ್ದರು. ಎಲ್ಲಾ ಪದಾಧಿಕಾರಿಗಳ ಹಾಗೂ ಕಾರ್ಯನಿರ್ವಾಹಕ ಮಂಡಳಿ ಸದಸ್ಯರುಗಳ ನಂಬಿಕೆಗೆ ಪಾತ್ರರಾಗಿದ್ದ ನೆಚ್ಚಿನ ಸುರೇಶ ಹಂದೆಯವರು ಸಾಮಾನ್ಯ ಸದಸ್ಯರ ಹಾಗೂ ಕೂಟ ಬಂಧುಗಳ ಮೆಚ್ಚುಗೆ ಗಳಿಸಿದ್ದರು. ತಮ್ಮಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ, ಕಾರ್ಮಿಕರ ಹಾಗೂ ವ್ಯವಸ್ಥೆಯ ಇತರ ಬಾಗಿದಾರರ ಅಪಾರ ವಿಶ್ವಾಸಗಳಿಸಿರುತ್ತಾರೆ.
ಆತ್ಮೀಯ, ಸರಳ, ಸಜ್ಜನಿಕೆಯ ಅಮೂರ್ತರೂಪರಾದ ಶ್ರೀ ಸುರೇಶ ಹಂದೆಯವರ ನಿಧನದಿಂದಾಗಿ ದ.ಕ.ಕೂಟ ಬ್ರಾಹ್ಮಣರ ಮಿತ್ರಮಂಡಳಿಯ ಕಾರ್ಯನಿರ್ವಾಹಕ ಮಂಡಳಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ದಿನಾಂಕ 24.09.2024 ರಂದು ನಡೆದ ಸಭೆಯಲ್ಲಿ ಹಂದೆಯವರು 20 ವರ್ಷಗಳ ದೀರ್ಘಕಾಲ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಪ್ರಶಂಸೆಯೊಂದಿಗೆ ದಾಖಲಿಸಲು ತೀರ್ಮಾನಿಸಲಾಯಿತು. ಶ್ರೀ ಸುರೇಶ ಹಂದೆಯವರ ಆತ್ಮ ಸಾಯುಜ್ಯ ಪಡೆಯಲಿ ಎಂದು ಶ್ರೀ ಗುರುನರಸಿಂಹನಲ್ಲಿ ಪ್ರಾರ್ಥಿಸಲಾಯಿತು. ಹಂದೆಯವರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿ ಅವರ ಪತ್ನಿಗೆ ಶ್ರೀ ದೇವರು ಕರುಣಿಸಲಿ ಎಂದು ಕಾರ್ಯನಿರ್ವಾಹಕ ಮಂಡಳಿ ಹಾರೈಸುತ್ತದೆ.
ಸಹಿ/-
ಕಾರ್ಯದರ್ಶಿ