ಮನವಿ
ಮಾನ್ಯ ಸದಸ್ಯರೇ,
ನಮ್ಮ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ, ಹಾಗೂ ನಮ್ಮ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ಸುರೇಶ ಹಂದೆಯವರು ಅಕಾಲಿಕವಾಗಿ ಹಾಗೂ ಆಕಸ್ಮಿಕ ನಿಧಾನವಾಗಿರುವುದು ತಮಗೆಲ್ಲ ತಿಳಿದಿರುತ್ತದೆ. ನಮ್ಮ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಅಧ್ಯಕ್ಷರು, ಶ್ರೀಯುತ ಹಂದೆಯವರ ಅಕಾಲಿಕ ಹಾಗೂ ಹಠಾತ್ ನಿಧನದಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು ಅವರ ಮುಂದಿನ ಕುಟುಂಬ ನಿರ್ವಹಣೆಗಾಗಿ ಉದಾರವಾಗಿ ದೇಣಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆಯ ಮಾಹಿತಿ ನಮ್ಮ ಅವಗಾಹನೆಗೆ ಬಂದಿರುವುದಿಲ್ಲ. ಆದ್ದರಿಂದ ತಮ್ಮಿಂದಾದ ಸಹಾಯವನ್ನು ಶ್ರೀಯುತರ ಕುಟುಂಬಕ್ಕೆ ನೀಡಲು ಇನ್ನೊಮ್ಮೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ನಮ್ಮ ಸಂಸ್ಥೆಯು ಈಗಾಗಲೇ ಅವರ ಕುಟುಂಬಕ್ಕೆ ಕಾನೂನು ರೀತ್ಯ ಸೇವಾ ಪರಿಹಾರವನ್ನು ನೀಡಿದೆ.
ತಮ್ಮ ಅನುಕೂಲಕ್ಕಾಗಿ ಸಂಸ್ಥೆಯ QR ಕೋಡ್ ನ್ನು ಕೆಳಗೆ👇 ಕೊಡಲಾಗಿದೆ ತಮ್ಮ ದೇಣಿಗೆಯನ್ನು ಸದರೀ ಬ್ಯಾಂಕಿಗೆ ನೇರವಾಗಿ ಕಳುಹಿಸಿದಲ್ಲಿ ಅದನ್ನು ಅವರ ಕುಟುಂಬಕ್ಕೆ ವರ್ಗಾಯಿಸಲಾಗುವುದು.
ಸ್ಪಂದಿಸಿದ ಸದಸ್ಯರು \ ಕೂಟ ಬಂಧುಗಳು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಹಾಗೂ ಈಗಾಗಲೇ ಯಾವುದೇ ಸದಸ್ಯರು ಯಾವುದೇ ರೀತಿಯಲ್ಲಿ ಸ್ಪಂದಿಸಿದಲ್ಲಿ ಈ ಬಗ್ಗೆಯೂ ಸಂಸ್ಥೆಗೆ ಮಾಹಿತಿ ನೀಡಲು ಕೋರಲಾಗಿದೆ.
🙏🙏
ಆಡಳಿತ ಮಂಡಳಿಯ ಸರ್ವಸದಸ್ಯರು
ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ
ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು
Respected Members,
It is known to all of you that Mr. Suresh Hande, who served as a manager in our organization for over twenty years, passed away earlier this year. During our Annual General Meeting, our President appealed to all members to contribute generously to support his family, who have been deeply affected by this sudden loss. However, we have not received any updates regarding responses to this appeal.
Therefore, we once again request your kind assistance for Mr. Hande’s family. The organization has already provided the legally mandated compensation to his family. For your convenience, the organization’s QR code is provided below 👇. You may directly transfer your contributions to the mentioned bank account, and they will be forwarded to the family.
Members who respond or contribute are requested to share their information. Additionally, if any member has already responded in any way, we kindly ask you to inform the organization about the same.
🙏🙏
All Members of the Administrative Committee
DKKBMM, Bull Temple Road, Basavanagudi, Bengaluru